Monday, April 2, 2018

ಗೀಚಿಂಗ್

     ಮನಸಿಗೆ ತೋಚುವ ಉತ್ತಮ ವಿಚಾರಗೋಳ ಹಾಳಿ ಮ್ಯಾಲ ಗೀಚೋ ನೀನು ಫೇಸ್ ಬುಕ್ ವಾಲ್ ಗೂ ಬರಿಯೋ ಪಾ ಅಂತ ಸನ್ಮಿತ್ರರೊಬ್ರು ಸಲಹೆ ಕೊಟ್ರ. ಅದಕ್ ಇನ್ನ ಮುಂದ ಗೀಚ ಬೇಕಂತ ವಿಚಾರ ಮಾಡೇನೀ ಗೆಳೆಯರೇ.

     ನಿಮ್ಮ positive negative ಸಲಹೆ ಸೂಚನೆಗಳಿಗೆ ಮುಕ್ತ ಸ್ವಾಗತ.

     ಈ ಟೈಮ್ ಗೆ ಪುರಸೊತ್ತ ಇಲ್ಲಾ ನಮ್ಮ ಸಲುವಾಗಿ ಒಂದೆರಡ ತಾಸ ಇನ್ ಕ್ರೀಜ್ ಆಗಿದ್ರ ಪುಣ್ಯ ಹತ್ತಿತ್...ನನ್ನ ಕೈಯೊಳಗ ಕಲಿಯು ಮಕ್ಕಳ ಮೇಲಿನ ಅತಿಯಾದ ಪ್ರೀತಿ,ಹೊಸದನ್ನ ಸಾನಸಬೇಕ್ ಅನ್ನು ತುಡಿತ, ಸಮಾಜ ಸೇವೆಯ ಹುಚ್ಚು, ಆದಷ್ಟ ಒಳ್ಳೇದ ಬಯಸಿ ಒಳ್ಳೇದ ಮಾಡಬೇಕನ್ನೊ ಗುಂಗು, ಬಿಟ್ಟ ಇರೋಕೆ ಆಗದ ಗೆಳೆಯರ ಹಿಂಡು,ಹೆಚ್ಚಾಗಿ ಸ್ವಾರ್ಥೀಗಳೇ ಕಾಣ ಸಿಗುವ ಸಮಾಜದಲ್ಲಿ ಹೆಂಗರ,ಎಷ್ಟರ ಪರಿವರ್ತನೆ ತರಬೇಕನ್ನುವ ಹೊಲಸು ಹಂಬಲ,ಸುದ್ದಿ ಸಮಾಚಾರ ಗೀಚಲು ಸಂಜೆ ಕಂಪ್ಯೂಟರ್ ಜತೆಗೊಂದಿಷ್ಟು ದೋಸ್ತಿ, ಇದೆಲ್ಲದರ ನಡುವೆ ನಿಮ್ಮೆಲ್ಲಾರ ಜೊತೆ ಫೇಸ್ಬುಕ್ ವಾಲ್ ನಲ್ಲಿ ಮನಸ್ಯಾಗಿನ ಚುಲೋ ಉದ್ದೆಶ ವಿಚಾರ ಹಂಚಿಕೋಬೇಕನ್ನುವ ಮಹದಾಸೆ
ಆದ್ರೆ ಟೈಮ್ ಸಾಲ್ತಿಲ್ಲ ಗೆಳೆಯರೇ ಬೆಳಕಾಯ್ತು ಅನ್ನೋವಷ್ಟರಲ್ಲಿ ಗಪ್ಪನೆ ರಾತ್ರಿ ಆಗೆ ಬಿಡತೈತಿ

     ಇರ್ಲಿ ಇನ್ನೇನು ಸೂಟಿ ಸನೇಕ ಬಂತ ಬರ್ಯಾಕ ಓದಾಕ ಒಂದಿಟ ಪುರಸೊತ್ತ ಸಿಗತತಿ ಅನಸ್ತೈತಿ...ಟ್ರೈ ಮಾಡ್ತೇನಿ ಪ್ರೆಂಡ್ಸ್.....

     ಹಾ!! ಇನ್ನೊಂದ ಮಾತ ಸ್ನೇಹಿತರೆ ಮಾಸ್ತರ ಬರಿತಾನಂಗಾರಿನ್ನ ಅಂತ ಕೆಲವು ಮನುಷ್ಯರು ಅಲ್ಲಲ್ಲ ಮನಸುಗಳು ಹೌ ಹಾರಬಹುದಿನ್ನ.....

No comments:

Post a Comment

ಶತಾಯುಷಿಗೆ ಕೋಟಿ ನಮನ

ನಮ್ಮೆಲ್ಲರ ಆರಾಧ್ಯ ಗುರುಗಳಾಗಿರುವ ಪೂಜ್ಯರಿಗೆ ಆದಷ್ಟು ಶೀಘ್ರ #ಭಾರತ #ರತ್ನ #ಪ್ರಶಸ್ತಿ ಸಿಗಬೇಕೆಂಬುದು ನಮ್ಮ ಆಶಯ....ಹಾಗೆಯೇ ಆರು ವರೇ ಕೋಟಿ ಕನ್ನಡಿಗರ ಆಗ್ರಹದ ಬೇಡ...